ಟಫೆಟಾ
	ಸಾದಾ ನೇಯ್ಗೆಯ ವಿವಿಧ ಬಟ್ಟೆಗಳನ್ನು ವಿವರಿಸಲು ಉಪಯೋಗಿಸುವ ಪದ. ಪೂರ್ಣ ರೇಷ್ಮೆಯ ಒತ್ತಾಗಿ ನೇಯ್ದ ಬಟ್ಟೆಯೊಂದರಲ್ಲಿ ಹಾಸು ಹೊಕ್ಕುಗಳ ಸಂಖ್ಯೆ ಇಂಚು ಪ್ರಮಣಕ್ಕೆ ಸಮವಾಗಿದ್ದು ಅವುಗಳ ಮಾಪಾಂಕವೂ (ಕೌಂಟ್) ಒಂದೇ ಆಗಿರುವುದು. ಫ್ರಾನ್ಸಿನಲ್ಲಿ ತಯಾರಿಸಿದ ಒಂದು ರೇಷ್ಮೆ ಟಫೆಟಾ ಸಾದಾ ನೇಯ್ಗೆ. ಇದರಲ್ಲಿ ಆರ್ಗನ್‍ಸೈನ್ ರೇಷ್ಮೆಯ ಹಾಸನ್ನೂ ಟ್ರಾಮ್ ಹೊಕ್ಕನ್ನೂ ಉಪಯೋಗಿಸುತ್ತಾರೆ. ಒಂದು ಇಂಚಿಗೆ 180-200 ಹಾಸುಗಳು ಮತ್ತು 72-100 ಹೊಕ್ಕುಗಳಿರುತ್ತವೆ. ಪನ್ನ 27, 36 ಮತ್ತು 40 ಇಂಚುಗಳು. ಹಯಾಸಿನ ಬಣ್ಣಕ್ಕಿಂತ ಬೇರೆಯಾದ ಹೊಕ್ಕಿನಿಂದ ತಯಾರಿಸಿದ ಬಟ್ಟೆಗೆ ಟಫೆಟಾ ಗ್ಲೇಸ್ ಎಂದು ಹೆಸರು. ಬ್ರಾಡ್‍ಫೋರ್ಡಿನಲ್ಲಿ ಉತ್ತಮ ತರಹ ಟಫೆಟಾಗಳನ್ನು ಉಣ್ಣೆಯಿಂದ ಮಾಡಿ ಕುಡ್ತದ (ಶರ್ಟ್) ಬಟ್ಟೆಗಳಿಗಾಗಿ ಉಪಯೋಗಿಸುತ್ತಾರೆ. ಇದರ ವ್ಯಾಪಾರವೂ ಹೆಚ್ಚಾಗಿ ನಡೆದಿದೆ. ಹತ್ತಿಯ ಟಫೆಟಾದಲ್ಲಿ ಒಂದು ಇಂಚೆಗೆ 60 ಹಾಸು ಮತ್ತು 100 ಹೊಕ್ಕುಗಳಿರುತ್ತವೆ. ಈ ಬಟ್ಟೆಗೆ ಚಲುವೆ ಮಾಡಿ ಬಣ್ಣ ಹಾಕಲಾಗುವುದು. ಹತ್ತಿನಲ್ಲಿ ದಪ್ಪವಾದ ಟಫೆಟಾವನ್ನು ಮಾಡುತ್ತಾರೆ. ಇದಕ್ಕೆ ಬಗೆಬಗೆಯ ಬಣ್ಣ ಹಾಕುತ್ತಾರೆ.

	ಮೊದಲಿಗೆ ಟಫೆಟಾ ಪದ ಸಿಲ್ಕ್ ಬಟ್ಟೆಯನ್ನು ಮಾತ್ರ ಸೂಚಿಸುತ್ತಿತ್ತು. 14ನೆಯ ಶತಮನಕ್ಕೆ ಮೊದಲೇ ಇಂಗ್ಲೆಂಡಿನಲ್ಲಿ ಇದು ಬಳಕೆಯಲ್ಲಿತ್ತು. ಬಹುಶಃ ಅಲ್ಲೇ ತಯಾರಿಸಿದ್ದಿರಬೇಕು. ಆಗ ಇದನ್ನು ಟಫೆಟಾಸ್ ಎಂದು ಕರೆಯುತ್ತಿದ್ದರು. ಬೆಲೆಬಾಳುವ ಮ್ಯಾಂಟಲ್ಸ್‍ಗೆ ಒಳಪದರವಾಗಿ ಇದರ ಉಪಯೋಗವಿತ್ತು. ಆಮೇಲೆ 16ನೆಯ ಶತಮಾನದಲ್ಲಿ ಬಹಳವಾಗಿ ಉಡುಗೆಯ ಅನೇಕ ವಸ್ತುಗಳಿಗೆ ಇದರ ಬಳಕೆ ಬಂತು.											(ಬಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ